Skip to content

ಕರ್ನಾಟಕದಲ್ಲಿ ನಕ್ಷಲರ ವಿರುದ್ಧ ಗ್ರೀನ್ ಹಂಟ್ ಮಾದರಿಯ ಕಾರ್ಯಾಚರಣೆಗೆ ಮುನ್ನುಡಿ ?

January 6, 2012

ಉಡುಪಿ: ಛತ್ತೀಸ್ ಘಡ್ ರಾಜ್ಯದಲ್ಲಿ ನಕ್ಷಲ್ ಚಳುವಳಿಯನ್ನು ನಿರ್ನಾಮ ಮಾಡಲು ಅಲ್ಲಿನ ಸರಕಾರ ಗ್ರೀನ್ ಹಂಟ್ ಕಾರ್ಯಾಚರಣೆಯನ್ನು ಕೈಗೊಂಡಂತೆ, ಕರ್ನಾಟಕ ಸರಕಾರವೂ ವಿಶೇಷ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿದೆಯೇ ಎಂಬ ಸಂಶಯ ಇದೀಗ ವ್ಯಕ್ತಗೊಂಡಿದೆ.
ಪಶ್ಚಿಮ ಘಟ್ಟ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಸಕ್ರಿಯವಾಗಿರುವ ಸಿಪಿಐ (ಮಾವೋವಾದಿ) ಹೋರಾಟವನ್ನು ಧಮನಿಸಲು ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ನೂರು ಮಂದಿ ಯುವಕರನ್ನು ಪೋಲೀಸ್ ಇಲಾಖೆಗೆ ಸೇರ್ಪಡೆ ಮಾಡಲು ಸರಕಾರ ನಿರ್ಧರಿಸಿರುವ ವಿಷಯ ರಾಜ್ಯ ಪೋಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಅವರ ಬಾಯಿಯಿಂದ ಹೊರಬಿದ್ದಿದ್ದು, ಇದು ಅನೇಕ ಸಂಶಯಗಳಿಗೆ ಕಾರಣವಾಗಿದೆ.

ಇಂದು ಹೆಬ್ರಿಯಲ್ಲಿ ನಡೆದ, ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಷಲರಿಂದ ಹತ್ಯೆಗೀಡಾದ ಪೋಲೀಸ್ ಮಾಹಿತಿದಾರ ಸದಾಶಿವ ಗೌಡ ಅವರ ಕುಟುಂಬಕ್ಕೆ ನಷ್ಟ ಪರಿಹಾರ ನೀಡುವ ಸಮಾರಂಭದಲ್ಲಿ ರಾಜ್ಯ ಪೋಲೀಸ್ ಮಹಾ ನಿರ್ದೇಶಕರಾದ ಶಂಕರ್ ಬಿದರಿ ಅವರು ಮಾತನಾಡುತ್ತಾ, ಜಿಲ್ಲೆಯ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ 18 ರಿಂದ 25 ವರ್ಷ ವಯೋಮಾನದ 100 ಮಂದಿ ಯುವಕರನ್ನು ಪೋಲೀಸ್ ಇಲಾಖೆಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ನಕ್ಷಲ್ ಚಳುವಳಿಯಲ್ಲಿರುವ ಹೆಚ್ಚಿನವರೂ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, ಇವರ ವಿರುದ್ಧ ಬಂದೂಕು ಕೈಗೆತ್ತಿಕೊಂಡು ಹೊಡೆದುರುಳಿಸಲು ಅದೇ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮುಗ್ದ ಯುವಕರ ಕೈಗೆ ಬಂದೂಕು ನೀಡುವುದೆಂದರೆ ಅದು ಮತ್ತೊಂದು ಗ್ರೀನ್ ಹಂಟ್ ಕಾರ್ಯಾಚರಣೆಯೇ ಆಗಲಿದೆ ಎಂಬುದನ್ನು ಯಾರು ಬೇಕಾದರೂ ಅಂದಾಜಿಸಬಹುದಾಗಿದೆ.

ಕರ್ನಾಟಕದಲ್ಲಿ ನಕ್ಷಲರನ್ನು ಧಮನಿಸಲು ಆದಿವಾಸಿಗಳನ್ನೇ ಉಪಯೋಗಿಸುವುದೆಂದರೆ, ಮುಂದೆ ನಡೆಯಬಹುದಾದ ಸಾವು ನೋವುಗಳಿಗೆ ಬಡ ಮತ್ತು ಮುಗ್ದ ಆದಿವಾಸಿಗಳೇ ಬಲಿಯಾಗಲಿ ಎಂಬಂತೆ ಆಗಲಿದೆ. ಮತ್ತೆ ಮಾನವ ಹಕ್ಕಿನ ಮೇಲೆ ದೌರ್ಜನ್ಯ ನಡೆಯಲಿದೆ ಅಷ್ಟೇ ಎಂದು ಮಾನವ ಹಕ್ಕು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಛತ್ತೀಸ್ ಘಡ್ ರಾಜ್ಯದಲ್ಲಿ ಅಲ್ಲಿನ ಸರಕಾರ ನಕ್ಷಲರ ವಿರುದ್ಧ ನಡೆಸಿದ ಇದೇ ಮಾದರಿಯ ಕಾರ್ಯಾಚರಣೆಗೆ ಸಾವಿರಾರು ಮಂದಿ ಆದಿವಾಸಿಗಳು ಬಲಿಯಾಗಿದ್ದರು. ಬಳಿಕ ಮಾನವ ಹಕ್ಕು ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ನ್ಯಾಯಾಲಯವು ಸರಕಾರದ ಗ್ರೀನ್ ಹಂಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು.

ಹೆಬ್ರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಸದಾಶಿವ ಗೌಡ ಅವರ ತಾಯಿಗೆ 3 ಲಕ್ಷ ರು. ಪರಿಹಾರ ಧನವನ್ನು ವಿತರಿಸಿದ ಶಂಕರ್ ಬಿದರಿ ಅವರು, ಕರ್ನಾಟಕದಲ್ಲಿ ಎಂದಿಗೂ ನಕ್ಕ್ಷಲ್ ಚಳುವಳಿಗೆ ಭವಿಷ್ಯವಿಲ್ಲ. ಹಾಗಾಗಿ ನಕ್ಷಲ್ ಚಳುವಳಿಯಲ್ಲಿ ತೊಡಗಿರುವ ಜನರು ಸರಕಾರ ಘೋಷಿಸಿರುವ ಶರಣಾಗತಿ ಪ್ಯಾಕೇಜನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಶರಣಾಗತಿಯಾಗುವಂತೆ ಬಹಿರಂಗ ಮನವಿ ಮಾಡಿಕೊಂಡರು.

ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಡಾ.ವೈ.ಎಸ್.ರವಿ ಕುಮಾರ್, ಎ.ಎನ್.ಎಫ್. ಅಧಿಕಾರಿ ಅಲೋಕ್ ಮೊದಲಾದವರು ಉಪಸ್ಥಿತರಿದ್ದರು.

ಜನಲೋಕಪಾಲ್ ನಿಂದ ಸರ್ವಾಧಿಕಾರಿ ಸೃಷ್ಟಿಯಾಗುವ ಸಾಧ್ಯತೆ: ಶ್ರೀರಾಮ ದಿವಾಣ

December 28, 2011

ಉಡುಪಿ: ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಉಪಯೋಗಿಸುವ ಮೂಲಕ ಬಹಳಷ್ಟು ಹಗರಣಗಳನ್ನು ಬಯಲುಮಾಡಲು ಸಾಧ್ಯ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಆರ್ ಟಿ ಐ ಒಂದು ಪರಿಣಾಮಕಾರಿ ಅಸ್ತ್ರ. ಜನಲೋಕಪಾಲ್ ಗೆ ಒತ್ತಾಯಿಸಿ ಅದು ಜ್ಯಾರಿಯಾದರೆ, ದೇಶದಲ್ಲೊಬ್ಬ ಸರ್ವಾಧಿಕಾರಿ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಹೀಗೆ ಮಾಡುವ ಬದಲು, ಈಗ ಇರುವ ಕಾನೂನುಗಳನ್ನು ಪ್ರತಿಯೊಬ್ಬನೂ ಬಳಸಿಕೊಳ್ಳುವ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸಾಧಿಸಲು ಸಾಧ್ಯ ಎಂದು ಜನಪರ ರಾಜಕೀಯ ಮತ್ತು udupibits.com ನ ಸಂಪಾದಕರೂ, ಕರ್ನಾಟಕ ಜನಪರ ವೇದಿಕೆಯ ಸಂಚಾಲಕರೂ ಆದ ಶ್ರೀರಾಮ ದಿವಾಣ ಹೇಳಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಡಿ.27 ರಂದು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಉಪನ್ಯಾಸ ನೀಡಿ ದಿವಾಣ ಮಾತನಾಡುತ್ತಿದ್ದರು.
ಶಿಬಿರಾಧಿಕಾರಿಗಳಾದ ಶ್ರೀಮತಿ ಅನ್ನಮ್ಮ, ಜೋಸೆಫ್ ಪೀಟರ್ ಫೆರ್ನಾಂಡಿಸ್, ಸಹಾಯಕ ಶಿಬಿರಾಧಿಕಾರಿಗಳಾದ ಮಂಜುನಾಥ್, ಶ್ರೀಮತಿ ಪೂರ್ಣಿಮಾ, ಕು.ಪುಷ್ಪಾ ಹಾಗೂ ಭರತ್ ಕುಮಾರ್ ಉಪಸ್ಥಿತರಿದ್ದರು.

ನ.14 : ಉಡುಪಿಯಲ್ಲಿ ಡಾ.ಶಶಿಕಾಂತರಿಂದ ಕನಕದಾಸ ಕೀರ ್ತನೆಗಳ ಗಾಯನ

November 13, 2011

ಉಡುಪಿ: ಕನಕದಾಸ ಜಯಂತಿ ಉತ್ಸವದ ಅಂಗವಾಗಿ ನವೆಂಬರ್ 14 ರಂದು ಮಧ್ಯಾಹ್ನ 2 . 30 ಗಂಟೆಗೆ ಉಡುಪಿ ಶ್ರೀ ಕೃಷ್ಣ ದೇಗುಲದ ರಾಜಾಂಗಣದಲ್ಲಿ ಉಡುಪಿ ನಿನಾದ ಬಳಗದ ಡಾ.ಕೆ.ಶಶಿಕಾಂತ್ ಅವರಿಂದ ಕನಕ ದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ಕಾಯ್ದೆ ಪ್ರಕಾರ ದಂಡ ವಿಧಿಸಲು ಮಾಹಿತಿ ಆಯೋಗ ಹಿಂ ದೇಟು: ಜಯನ್ ಮಲ್ಪೆ

November 7, 2011

ಉಡುಪಿ: ಮಾಹಿತಿ ಹಕ್ಕು ಕಾಯ್ದೆಯಲ್ಲಿ ಮಾಹಿತಿ ನೀಡದ ಸರಕಾರೀ ಅಧಿಕಾರಿಗಳಿಗೆ ದಂಡ ವಿಧಿಸಲು ಅವಕಾಶ ಇದೆ. ಆದರೆ, ಮಾಹಿತಿ ಅಧಿಕಾರಿಗಳು ಅಧಿಕಾರಿಗಳಿಗೆ ದಂಡ ವಿಧಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಮಾಹಿತಿ ಹಕ್ಕು ಪ್ರಕಾರ ಉದ್ಯೋಗ ಖಾತ್ರಿ ಹಗರಣದ ಹಿಂದೆ ಬಿದ್ದಾಗ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ಕೆಲವು ಲೋಪಗಳೂ ಬಹಿರಂಗಕ್ಕೆ ಬಂತು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆಸಿದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈ ಯೋಜನೆಯ ಪ್ರಕಾರ ಅವಕಾಶವಿಲ್ಲ. ಇದರಿದಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರಕಾರೀ ಅಧಿಕಾರಿಗಳು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಉಪಾಧ್ಯಕ್ಷರಾದ ಜಯನ್ ಮಲ್ಪೆ ಅವರು ಹೇಳಿದ್ದಾರೆ.
ಉಡುಪಿ ಟಿ.ಎ.ಪೈ ಹಿಂದಿ ಭವನದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಇಂದು ಆಯೋಜಿಸಿದ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಅಧ್ಯಕ್ಷ ಕೆ.ಎಸ್.ಉಪಾಧ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾಯ್ದೆಯನ್ನು ಸಮರ್ಥವಾಗಿ ಉಪಯೋಗಿಸುವ ನಿಟ್ಟಿನಲ್ಲಿ ಸಮಗ್ರ ಮಾಹಿತಿಯನ್ನು ನೀಡಿದರು.

ವೇದಿಕೆಯ ಸಹ ಕಾರ್ಯದರ್ಶಿ ಶ್ರೀರಾಮ ದಿವಾಣ ಅವರು ಸ್ವಾಗತಿಸಿ, ಪ್ರಸ್ತಾವನೆ ಮಾಡಿ, ವಂದಿಸಿದರು.
tags : udupi , rti , dss , karnataka janapara vedike , k.s.upadhya , shreeram diwan

ನವೆಂಬರ್ 6: ಉಡುಪಿಯಲ್ಲಿ ಮಾಹಿತಿಹಕ್ಕು ಕಾಯ್ದೆ ಶ ಿಬಿರ

October 28, 2011

ಉಡುಪಿ: ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯು ನವೆಂಬರ್ 6 ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಚಿತ್ತರಂಜನ್ ಸರ್ಕಲ್ ಪಕ್ಕದ ಟಿ.ಎ.ಪೈ ಹಿಂದಿ ಭವನದಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಮಾಹಿತಿ ಶಿಬಿರವನ್ನು ಹಮ್ಮಿಕೊಂಡಿದೆ.
ವೇದಿಕೆಯ ಉಪಾಧ್ಯಕ್ಷರಾದ ಜಯನ್ ಮಲ್ಪೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಉಪಾಧ್ಯ ಹಾಗೂ ಸಹ ಕಾರ್ಯದರ್ಶಿ ಶ್ರೀರಾಮ ದಿವಾಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಮಾಹಿತಿ ಕಹ್ಹು ಕಾರ್ಯಕರ್ತರ ವೇದಿಕೆ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದೆ.

tags : udupi , tri

ಉಡುಪಿಯಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಸಭೆ

October 16, 2011

ಉಡುಪಿ: ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಬಂದ ಅರ್ಜಿಗಳಿಗೆ ಕಾಯ್ದೆ ಪ್ರಕಾರ ಮಾಹಿತಿಗಳನ್ನು ನೀಡದೆ ಕಾಯ್ದೆಯನ್ನು ಉಲ್ಲಂಘಿಸುವ ವ್ಯಕ್ತಿಗಳಿಂದಲೇ ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ತರಬೇತಿ ನೀಡುವ ಶೋಚನೀಯ ಪರಿಸ್ಥಿತಿ ಉಡುಪಿಯಲ್ಲಿ ನಿರ್ಮಾಣವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಅಧ್ಯಕ್ಷರಾದ ಕೆ.ಎಸ್.ಉಪಾಧ್ಯ ಅವರು ಹೇಳಿದರು.

ಇಂದು ಉಡುಪಿಯ ಟಿ.ಎ.ಪೈ ಹಿಂದಿ ಭವನದಲ್ಲಿ ನಡೆದ ಮಾಹಿತಿ ಹಕ್ಕು ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜಯನ್ ಮಲ್ಪೆ, ಸದಾಶಿವ ಬ್ರಹ್ಮಾವರ, ಕೆ.ಸಿ.ಮಲ್ಯ ಮೊದಲಾದವರು ಪಾಲ್ಗೊಂಡಿದ್ದರು. ಶ್ರೀರಾಮ ದಿವಾಣ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.

tags : udupi , rti , balakedaarara vedike , anna hajare , kiran bedy , aravinda kejrival

ಶಿರಸಿ: ಜನಪರ ವೇದಿಕೆ ಮುಖಂಡನ ಕೊಲೆ ಯತ್ನ- ಖಂಡನೆ

September 25, 2011

ಶಿರಸಿ : ಕರ್ನಾಟಕ ಜನಪರ ವೇದಿಕೆಯ ಶಿರಸಿ ತಾಲೂಕು ಸಮಿತಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಚಿಕ್ಕ ಬೆಂಗಳೆ ಅವರಿಗೆ ಮಧುಕೇಶ್ವರ ನಾಯ್ಕ ಎಂಬಾತ ಶನಿವಾರ ಕಟ್ಟಿ ಬೀಸಿ ಕೊಲೆಗೆ ಯತ್ನಿಸಿದ ಪ್ರಕರಣ ನಡೆದಿದೆ.
ಗಾಯಾಳು ಕೃಷ್ಣಮೂರ್ತಿ ಅವರು ಶಿರಸಿ ಸರಕಾರೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬನವಾಸಿ ಪೋಲೀಸ್ ತಾನೆಯಲ್ಲಿ ಆರೋಪಿ ವಿರುದ್ದ ಮೊಕದ್ದಮೆ ದಾಖಲಾಗಿದೆ.

ಮೊಕದ್ದಮೆ ದಾಖಲಿಸುವ ಸಂದರ್ಭದಲ್ಲಿ ಪೋಲೀಸ್ ತಾನೆಗೆ ಆಗಮಿಸಿದ ಆರೋಪಿ ಮಧುಕೇಶ್ವರ ನಾಯ್ಕನ ಸುಮಾರು 30 ಮಂದಿ ಸಹಚರರು ಪೋಲೀಸರ ಎದುರೇ ಕೃಷ್ಣಮೂರ್ತಿ ಅವರಿಗೆ ಬದರಿಕೆ ಹಾಕಿದ ಘಟನೆಯೂ ನಡೆದಿದೆ ಎಂದು ದೂರಲಾಗಿದೆ.
ಜನಪರ ವೇದಿಕೆಯ ತಾಲೂಕು ಘಟಕವು ಗುಡ್ನಾಪುರ ಗ್ರಾಮ ಪಂಚಾಯತ್ ನ ಅವ್ಯವಹಾರದ ವಿರುದ್ದ ಹೋರಾಟ ಆರಂಭಿಸಿದ ಬಳಿಕ ವೇದಿಕೆ ಪ್ರಮುಖರ ಮೇಲೆ ಹಲ್ಲೆ, ಬೆದರಿಕೆ ಇತ್ಯಾದಿ ಪ್ರಕರಣಗಳು ನಡೆಯುತ್ತಿದೆ. ಆದರೆ ಇದಕ್ಕೆಲ್ಲ ವೇದಿಕೆಯ ಪ್ರಮುಖರು ಹೆದರುವುದಿಲ್ಲ ಎಂದು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಲ್ಲೆ ಪ್ರಕರಣವನ್ನು ವೇದಿಕೆಯ ಕೇಂದ್ರ ಸಮಿತಿ, ಶಿರಸಿ ತಾಲೂಕು ಸಮಿತಿ ಮತ್ತು ಚೌಡೇಶ್ವರಿ ನಗರ ಘಟಕ ಖಂಡಿಸಿದೆ.
tags : karavar , shirsi , banavasi , police

ಒಕ್ಟೋಬರ್ 16 : ಉಡುಪಿಯಲ್ಲಿ ಭ್ರಷ್ಟಾಚಾರದ ಸವಾಲು ಗಳ ಬಗ್ಗೆ ವಿಚಾರ ಸಂಕಿರಣ

September 12, 2011

ಉಡುಪಿ: ಭಾರತದ ಭ್ರಷ್ಟಾಚಾರದ ಸವಾಲುಗಳು ಮತ್ತು ಹೋರಾಟದ ದಿಕ್ಕು – ದೆಸೆ ಎಂಬ ವಿಷಯದ ಮೇಲೆ ಒಕ್ಟೋಬರ್ 16 ರಂದು ಬೆಳಗ್ಗೆ ಉಡುಪಿಯಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲು ಕರ್ನಾಟಕ ಜನಪರ ವೇದಿಕೆಯ ಉಡುಪಿ ಜಿಲ್ಲಾ ಘಟಕ ನಿರ್ಧರಿಸಿದೆ.
ಸಮಿತಿ ಜಿಲ್ಲಾಧ್ಯಕ್ಷ ರಸೂಲ್ ಕಟಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಿಂಗಳ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿ ಸಂಚಾಲಕ ಶ್ರೀರಾಮ ದಿವಾಣ, ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಹೇಮಂತ ಕುಂದರ್, ಮುಹಮ್ಮದ್ ಹಂದಟ್ಟು, ವಿಲ್ಫಿ ಶಂಕರಪುರ, ಶೇಖರ ಮುದ್ರಾಡಿ, ಪ್ರಕಾಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.
tags : udupi , karnataka , anna hajare , kiran bedi , prashanth bhushan , aravinda kejrival

ಶಿರಸಿ: ಜನಪರ ವೇದಿಕೆ ಮುಖಂಡ ರವಿ ನವಣಗೆರೆ ಮೇಲೆ ಹಲ್ಲೆ ಯತ್ನ, ಸುಳ್ಳು ಕೇಸು ದಾಖಲು- ಖಂಡನೆ

September 4, 2011

ಶಿರಸಿ : ಕರ್ನಾಟಕ ಜನಪರ ವೇದಿಕೆಯ ಕೇಂದ್ರ ಸಮಿತಿ ಸಹ ಸಂಚಾಲಕ ರವಿ ನವಣಗೆರೆ ಅವರ ಮೇಲೆ ಗುಡ್ನಾಪುರ ಗ್ರಾಮ ಪಂಚಾಯತ್ ನವರು ಹಲ್ಲೆ ನಡೆಸಿದ ಘಟನೆ ಸೆಪ್ಟೆಂಬರ್ 3 ರಂದು ಮಧ್ಯಾಹ್ನ ಬನವಾಸಿಯಲ್ಲಿ ನಡೆದಿದೆ.
ಸೆಪ್ಟೆಂಬರ್ 2 ರಂದು ರವಿ ಅವರಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಗ್ರಾ.ಪಂ. ಮಾಜಿ ಸದಸ್ಯ ಮತ್ತು ಗುತ್ತಿಗೆದಾರ ಸುಧಾಕರ ನಾಯ್ಕ ಎಂಬಾತ ಗ್ರಾ.ಪಂ. ಭ್ರಷ್ಟಾಚಾರದ ವಿರುದ್ದ ತಾಲೂಕು ಪಂಚಾಯತ್ ಗೆ ದೂರು ನೀಡಿದ್ದಕ್ಕೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಬನವಾಸಿ ಪೋಲೀಸ್ ತಾನೆಗೆ ದೂರು ನೀಡಲು ಹೋಗುತ್ತಿರುವ ಸಂದರ್ಭದಲ್ಲಿ ಶನಿವಾರ ಮಧ್ಯಾಹ್ನ ಗುಡ್ನಾಪುರ ಗ್ರಾ.ಪಂ. ಅಧ್ಯಕ್ಷ ಸತೀಶ್ ಬೀರಪ್ಪ ನಾಯ್ಕ, ಮಾಜಿ ಸದಸ್ಯ ಮತ್ತು ಗುತ್ತಿಗೆದಾರ ಸುಧಾಕರ ನಾಯ್ಕ ಹಾಗೂ ಇತರ 6 ಜನರು ರವಿ ನವಣಗೆರೆ ಅವರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದೂ ಅಲ್ಲದೆ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ರವಿ ಜೊತೆಗೆ ಜನಪರ ವೇದಿಕೆಯ ಸ್ಥಳೀಯ ಇಬ್ಬರು ಸದಸ್ಯರೂ ಇದ್ದರು.

ಈ ಬಗ್ಗೆ ರವಿ ನವಣಗೆರೆ ಅವರು ಆರೋಪಿಗಳ ವಿರುದ್ದ ಬನವಾಸಿ ಪೋಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆರೋಪಿಗಳು ರವಿ ವಿರುದ್ದ ಬನವಾಸಿ ಪೋಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಅಗೊಸ್ತ್ 30 ರಂದು ಗ್ರಾ.ಪಂ. ಗೆ ಭೇಟಿ ನೀಡಿದ ರವಿ ಅವರು ಗ್ರಾ.ಪಂ. ನಲ್ಲಿ ದಾಂಧಲೆ ನಡೆಸಿದ್ದು, ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ರವಿ ನವಣಗೆರೆ ಅವರ ವಿರುದ್ದ ಹಲ್ಲೆಗೆ ಯಥ್ನಿಸಿದ್ದೂ ಅಲ್ಲದೆ, ಸುಳ್ಳು ಮೊಕದ್ದಮೆ ದಾಖಲಿಸಿದ ಕ್ರಮವನ್ನು ವೇದಿಕೆಯ ಕೇಂದ್ರ ಸಮಿತಿ ಬಲವಾಗಿ ಖಂಡಿಸಿದೆ.
ಭ್ರಷ್ಟಾಚಾರದ ವಿರುದ್ದ ರಾಜಿ ರಹಿತ ಹೋರಾಟ ನಡೆಸುತ್ತಿರುವ ರವಿ ಹಾಗೂ ಇತರರನ್ನು ಧಮನಿಸಲು ಯತ್ನಿಸುತ್ತಿರುವ ಗುಡ್ನಾಪುರ ಗ್ರಾ.ಪಂ. ಅಧ್ಯಕ್ಷರು, ಗುತ್ತಿಗೆದಾರರು ಹಾಗೂ ಇತರರನ್ನು ಕೂಡಲೇ ಬಂಧಿಸಬೇಕು ಮತ್ತು ದಾಖಲಿಸಿದ ಸುಳ್ಳು ಕೇಸನ್ನು ಹಿಂತೆಗೆದುಕೊಳ್ಳಬೇಕು ಎಂದು ಕರ್ನಾಟಕ ಜನಪರ ವೇದಿಕೆಯ ಕೇಂದ್ರ ಸಮಿತಿಯ ಸಂಚಾಲಕರಾದ ಶ್ರೀರಾಮ ದಿವಾಣ ಅವರು ಪಶ್ಚಿಮ ವಲಯದ ಐ.ಜಿ.ಪಿ. ಹಾಗೂ ರಾಜ್ಯ ಪೋಲೀಸ್ ಮಹಾ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

tags : karavara , shirasi , banavasi , gudnapura , gudnapura grama panchayath , banavaasi polis , protest

ಕರ್ನಾಟಕ ಜನಪರ ವೇದಿಕೆ ಉಡುಪಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

August 26, 2011

ಉಡುಪಿ: ಕರ್ನಾಟಕ ಜನಪರ ವೇದಿಕೆ ಉಡುಪಿ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ರಸೂಲ್ ಕಟಪಾಡಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇಂದು ಉಡುಪಿಯ ಅಜ್ಜರಕಾಡುವಿನಲ್ಲಿ ವೇದಿಕೆ ಕೇಂದ್ರ ಸಮಿತಿ ಸಂಚಾಲಕ ಶ್ರೀರಾಮ ದಿವಾಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಉಪಾಧ್ಯಕ್ಷರುಗಳಾಗಿ ಮಾಧವ ನಾಯ್ಕ ಹಾಗೂ ಮೊಹಮ್ಮದ್ ಹಂದಟ್ಟು, ಕಾರ್ಯದರ್ಶಿಯಾಗಿ ಹೇಮಂತ್ ಕುಂದರ್, ಸಹ ಕಾರ್ಯದರ್ಶಿಯಾಗಿ ವಿಲ್ಫ್ರೆಡ್ ಡೆಸ, ಕಾರ್ಯಕಾರಿಣಿ ಸದಸ್ಯರಾಗಿ ಶ್ರೀರಾಮ ದಿವಾಣ, ಶೇಖರ ಶೆಟ್ಟಿ ಮುದ್ರಾಡಿ ಹಾಗೂ ಪ್ರಕಾಶ್ ಪೂಜಾರಿ ಅವರು ಆಯ್ಕೆಯಾದರು.
tags : shreeram diwan , rasul , hemanth , madhava , mohammad , vilfred , prakash , shekhar , udupi

Follow

Get every new post delivered to your Inbox.